‘ದಾದಾ ಇಸ್ ಬ್ಯಾಕ್ ಚಿತ್ರದಲ್ಲಿ ಪಾರ್ಥಿಬನ್
Posted date: 09 Mon, Mar 2015 – 02:47:19 PM

ಆಪಲ್ ಫ಼ಿಲಂಸ್ ಲಾಂಛನದಲ್ಲಿ ಅಜೇಯ್‌ರಾಜ್ ಅರಸ್ ಮತ್ತು ಶಂಕರ್ ಅವರು ನಿರ್ಮಿಸುತ್ತಿರುವ ‘ದಾದಾ ಇಸ್ ಬ್ಯಾಕ್ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.
‘ಗೊಂಬೆಗಳ ಲವ್ ಖ್ಯಾತಿಯ ಸಂತೋಷ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಖ್ಯಾತ ನಟ ಪಾರ್ಥಿಬನ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದು ಅವರು ಅಭಿನಯಿಸುತ್ತಿರುವ ಮೊದಲ ಕನ್ನಡ ಚಿತ್ರ. ಚಿತ್ರೀಕರಣಕ್ಕೆ ಪಾಲ್ಗೊಳ್ಳುವ ಮುನ್ನ ಪಾರ್ಥಿಬನ್ ಅವರು ಕನ್ನಡ ಚಿತ್ರರಂಗದ ಹೆಸರಾಂತ ನಟರಾದ ಡಾ:ರಾಜಕುಮಾರ್, ಡಾ:ವಿಷ್ಣುವರ್ಧನ್ ಹಾಗೂ ಬಾಲಕೃಷ್ಣ ಅವರ ಸ್ಮಾರಕಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಅರುಣ್, ಶ್ರಾವ್ಯ, ಮೀನಾ, ಶರತ್‌ಲೋಹಿತಾಶ್ವ, ಅಜೇಯ್, ಉದಯ್, ಅಚ್ಯುತರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅಕ್ಷಯ್.ಪಿ.ರಾವ್ ಅವರ ಸಂಕಲನವಿದೆ. ವಿ.ಮನೋಹರ್ ರಚಿಸಿರುವ ಹಾಡುಗಳಿಗೆ ಅನೂಪ್‌ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಅಲ್ಟಿಮೆಟ್ ಶಿವು ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed